🌸 In Loving Memory of Our Dear Little Stormer
Class: 7th Standard, RadhaKrishna Vidya Samasthe
Class Teacher: Pallavi C. R
—
ತನ್ವಿಕ್ ಕೇವಲ ನನ್ನ ವಿದ್ಯಾರ್ಥಿ ಮಾತ್ರವಲ್ಲ, ಗೆಳತಿ ಮತ್ತು ಸಹಪಾಠಿಯ ಮಗನೂ ಆಗಿದ್ದ.
ಚಿಕ್ಕವನಾಗಿದ್ದಾಗಿನಿಂದ ನನ್ನ ಕಣ್ಣ ಮುಂದೆ ಆಡಿ ಬೆಳೆದನು – ತುಂಟತನ, ಅತಿ ಮಾತು, ಎಲ್ಲದರಲ್ಲೂ ನಾನು ಭಾಗಿಯಾಗುತ್ತೇನೆ ಎನ್ನುವ ಉತ್ಸಾಹ ಅವನಲ್ಲಿತ್ತು.
ಪ್ರಾರ್ಥನಾ ಸಭಾಂಗಣದಲ್ಲಿ ಅವನ ಧ್ವನಿ ಇನ್ನೂ ಕಿವಿಗೆ ಹತ್ತಿರವಾಗಿ ಕೇಳಿಸುತ್ತಿದೆ. ಇಂಗ್ಲೀಷ್ ಕಲಿಕೆಯಲ್ಲಿ ಅವನು ಮಾತಾಡುತ್ತಿದ್ದ ರೀತಿ, ತರಗತಿಯಲ್ಲಿ ಅವನ ಅಸ್ತಿತ್ವ, ನಗು – ಇವೆಲ್ಲವೂ ನನ್ನ ಕಣ್ಣ ಮುಂದೆ ಇನ್ನೂ ಜೀವಂತವಾಗಿವೆ.
ಇಂದು ಅವನು ಅನಾರೋಗ್ಯದಿಂದ ನಮ್ಮೊಂದಿಗೆ ಇಲ್ಲ ಎಂಬ ಸುದ್ದಿ ಸಹಿಸಲಾಗದ ನೋವನ್ನು ತಂದಿದೆ. ನನಗೆ ಇಷ್ಟೊಂದು ದುಃಖವಾಗಿರುವಾಗ, ಅವನ ತಾಯಿ–ತಂದೆ ಎಷ್ಟು ನೋವಿನಲ್ಲಿದ್ದಾರೆಂದು ಕಲ್ಪನೆಗೂ ಬರದು. ದೇವರು ಅವರಿಗೆ ಈ ದುರಂತವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ.
ತನ್ವಿಕ್ ಆತ್ಮಕ್ಕೆ ಶ್ರೀಕೃಷ್ಣನ ಪಾದದಲ್ಲಿ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. 🙏
—
ದುಃಖ ತಪ್ತರು
ಅಥರ್ವ ಕೆ.ಪಿ
ಆರ್ಯ ಕೆ.ಪಿ
ಪುನೀತ್ ಕುಮಾರ್ (Yoga Master)
ಚಂದನ Miss
ಪಲ್ಲವಿ ಪುನೀತ್ Miss
ಪ್ರಕಾಶ್ Master
ದೇವರಾಜ್ Sir
ಮತ್ತು ಎಲ್ಲಾ 7ನೇ ತರಗತಿಯ Stormers – ಅವನ ಸಹಪಾಠಿಗಳು
—
With Passion Power & Purpose,
( 💐 ಬ್ರೈನ್ ಸ್ಟಾರ್ಮರ್
Favourite Master)